Tractor Subsidy Scheme : ಟ್ರಾಕ್ಟರ್ ಖರೀದಿಸುವ ರೈತರಿಗೆ ಭರ್ಜರಿ ಸಬ್ಸಡಿ

Tractor Subsidy Scheme : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರಕಾರ ರೈತರಿಗಾಗಿ ಅತ್ಯಂತ ಮಹತ್ವಾಕಾಂಕ್ಷೆಯ ಪಿಎಂ ಕಿಸಾನ್ ಯೋಜನೆಯನ್ನು ತಂದಿದೆ. ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯು, ಭಾರತೀಯ ರೈತರಿಗೆ ಟ್ರ್ಯಾಕ್ಟರ್‌ಗಳನ್ನು ಖರೀದಿಸಲು ಸಾಲವನ್ನು ನೀಡುತ್ತದೆ. ಈ ಯೋಜನೆಯು ರೈತರ ಕೃಷಿಗೆ ಅವಶ್ಯವಿರುವ ಟ್ರ್ಯಾಕ್ಟರ್‌ಗಳನ್ನು ಬಳಸಲು ಧನ ಸಹಾಯ ಮಾಡಿಕೊಡುತ್ತದೆ. ಈ ಯೋಜನೆಯಿಂದ ರೈತರ ಜೀವನವನ್ನು ಸುಧಾರಿಸುತ್ತದೆ. ಟ್ರಾಕ್ಟರ್ ಅನ್ನು ಸರಿಯಾಗಿ ಬಳಸುವುದರಿಂದ ಉತ್ಪನ್ನದ ಗುಣಮಟ್ಟ, ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ಈ ಯೋಜನೆಯು ಸಹಾಯ ಮಾಡುತ್ತದೆ.

ಪಿಎಂ ಕಿಸಾನ್ ಟ್ರಾಕ್ಟರ್ ಯೋಜನಯಡಿ ಟ್ರಾಕ್ಟರ್ ಖರೀದಿಸಲು ಇಚ್ಚಿಸುವ ರೈತರು ಆನ್‌ಲೈನ್ ಅಥವಾ ಸಂಬಂಧ ಪಟ್ಟ ಸ್ಛಳೀಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಹ ರೈತರು ಟ್ರಾಕ್ಟರ್ ಬೆಲೆಯ ಅರ್ಧದಷ್ಟು ಮಾತ್ರ ಪಾವತಿ ಮಾಡಿದರೆ ಸಾಕು. ಇನ್ನುಳಿದ ಅರ್ಧದಷ್ಟು ಹಣವನ್ನು ಕೇಂದ್ರ ಸರ್ಕಾರ ಪಾವತಿಸಲಿದೆ.

ಶೇಕಡಾ 50 ರಷ್ಟು ಸಬ್ಸಡಿ ಇರುವುದರಿಂದ ರೈತರು ಅರ್ಧದಷ್ಟು ಹಣ ಪಾವತಿಸಿದರೆ ಟ್ರಾಕ್ಟರ್ ಲಭ್ಯವಾಗಲಿದೆ. ಈ ಅರ್ಧ ಹಣಪಾವತಿಗೂ ಸಾಲ ಸೌಲಭ್ಯವಿದೆ. ಕೆಲ ರಾಜ್ಯಗಳು ಕೇಂದ್ರ ಸರ್ಕಾರದ ಸಬ್ಸಿಡಿ ಜೊತೆಗೆ ರಾಜ್ಯ ಸರ್ಕಾರಗಳು ಸಬ್ಸಿಡಿ ಘೋಷಿಸಿದೆ. ಹರ್ಯಾಣ,ಜಾರ್ಖಂಡ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ಒಟ್ಟು ಸಬ್ಸಡಿ ಗರಿಷ್ಠ ಶೇಕಡಾ 80 ರಷ್ಟಾಗಲಿದೆ.

ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಯಡಿ ಟ್ರಾಕ್ಟರ್ ಪಡೆಯಲು ಅರ್ಜಿ ಭರ್ತಿ ಮಾಡಬೇಕು. ಈ ಅರ್ಜಿಯಲ್ಲಿ ಕೆಲ ನಿಬಂಧನೆಗಳಿವೆ. ಅರ್ಹರನ್ನು ಪರಿಶೀಲಿಸಿ ಸರ್ಕಾರ ಸಬ್ಸಡಿ ನೀಡಲಿದೆ.

ಏನೆಲ್ಲಾ ಅರ್ಹತೆಗಳಿರಬೇಕು.?

• ಅರ್ಜಿದಾರರು ಭಾರತೀಯ ನಾಗರೀಕರನಾಗಿರಬೇಕು.
• ಅರ್ಜಿದಾರನ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು ಹಾಗೂ 60 ವರ್ಷದೊಳಗಿರಬೇಕು.
• ಕುಟುಂಬದ ಆದಾಯ ವಾರ್ಷಿಕ 1.5 ಲಕ್ಷಕ್ಕಿಂತ ಮೀರಬಾರದು.
• ಅರ್ಜಿದಾರರ ಸಣ್ಣ ರೈತರ ಮಾನದಂಡ ಅನ್ವಯವಾಗಬೇಕು.
• ಟ್ರಾಕ್ಟರ್ ಖರೀದಿಸುವ ರೈತ ತನ್ನ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿರಬೇಕು.
• ಅರ್ಜಿದಾರರ ಇತರ ಯಾವುದೇ ಸಬ್ಸಿಡಿ ಆಧಾರಿತ ಯೋಜನೆಯ ಫಲಾನುಭವಿಯಾಗಿರಬಾರದು.
• ಟ್ರಾಕ್ಟರ್‌ಗೆ ಅರ್ಜಿ ಹಾಕುವ ರೈತ ಕಳೆದ 7 ವರ್ಷದಲ್ಲಿ ಯಾವುದೇ ಟ್ರಾಕ್ಟರ್ ಖರೀದಿಸಿರಬಾರದು.

ಬೇಕಾಗುವ ದಾಖಲೆಗಳೇನು.?

• ಬ್ಯಾಂಕ್ ಖಾತೆ ವಿವರ
• ಗುರುತಿನ ಚೀಟಿ ದಾಖಲೆ (ಪ್ಯಾನ್ ಕಾರ್ಡ್, ಮತದಾರನ ಚೀಟಿ, ಪಾಸ್‌ಪೋರ್ಟ್, ಡ್ರೈವಿಂಗ್ ಲೆಸೆನ್ಸ್, ಇತ್ಯಾದಿ ಸೇರಿದಂತೆ)
• ಭಾವಚಿತ್ರ (ಪಾಸ್‌ಪೋರ್ಟ್ ಸೈಜ್ ಫೋಟೋ)
• ಭೂಮಿಯ ವಿವರ, ದಾಖಲೆ ಪತ್ರ

ಅರ್ಜಿಯಲ್ಲಿ ರೈತ ತುಂಬಬೇಕಾದ ಮಾಹಿತಿ :-

• ಅರ್ಜಿದಾರನ ಹೆಸರು(ಆಧಾರ್ ಕಾರ್ಡ್‌ನಲ್ಲಿರುವ ಹೆಸರು)
• ಅರ್ಜಿದಾರನ ಹುಟ್ಟಿದ ದಿನಾಂಕ
• ಲಿಂಗ
• ತಂದೆ ಅಥವಾ ಪತಿಯ ಹೆಸರು
• ಅರ್ಜಿದಾರನ ವಿಳಾಸ, ಜಿಲ್ಲೆ, ತಾಲೂಕು, ಹೊಬಳಿ
• ಜಾತಿ ವಿವರ
• ಅರ್ಜಿದಾರನ ಮೊಬೈಲ್ ಸಂಖ್ಯೆ

Leave a Reply

Your email address will not be published. Required fields are marked *