October 11, 2025

ಹನುಮಂತ ಎನ್ನುವ ವ್ಯಕ್ತಿ ಕರ್ನಾಟಕದಲ್ಲಿ ಬಲು ಫೇಮಸ್‌. ಹನುಮಂತ ಅಂದ ಅಂದಕೂಡಲೇ ಕೇಳುಗರು ಸರಿಗಮಪ ಹನುಮಂತನಾ? ಎಂದು ಪ್ರಶ್ನಿಸುವುದುಂಟು. ತನ್ನ ಮುಗ್ಧತೆ ಮೂಲಕ, ಹಾಡಿನ ಮೂಲಕ ಮನೆಮಾತಾದವರು ಹನುಮಂತ. ಇವರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಸರಿಗಮಪದಲ್ಲಿ ಹಾಡುವುದರ ಜೊತೆಗೆ ಡಾನ್ಸ್ ರಿಯಾಲಿಟಿ ಶೋನಲ್ಲಿ ಕುಣಿದು ತಾವು ಹಾಡೋದಕ್ಕೂ ಸೈ, ಕುಣಿಯೋದಕ್ಕೂ ಸೈ ಎಂದು ತೋರಿಸಿಕೊಟ್ಟರು. ಸರಿಗಮಪ ಶೋನ ನಿರೂಪಕಿ ಅನುಶ್ರೀ, ಹನುಮಂತನನ್ನು ತಮ್ಮ ಎಂದು ಕರೆಯುತ್ತಿದ್ದರು.

ಹನುಮಂತ ಪ್ರತಿನಿತ್ಯ ಒಂದಲ್ಲ ಒಂದು ವಿಚಾರಗಳಿಗೆ ಸುದ್ದಿಯಾಗುತ್ತಿದ್ದಾರೆ. ಇವರ ಹಾಡಿಗಿಂತ ಇತರ ವಿಚಾರಗಳೇ ಸದ್ದು ಮಾಡಿದ್ದವು ಅಂದರೆ ತಪ್ಪೇನಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ತುಂಬ ಚರ್ಚೆಗಳಾಗಿವೆ. ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಹನುಮಂತ ಅವರು ಚೆನ್ನಾಗಿ ನೃತ್ಯ ಪ್ರದರ್ಶನ ನೀಡಿದ್ದರು.

https://youtu.be/8sYHSq2qLFI?si=ci6x4jrcxYz-ODxd

ಅನೇಕ ಸೆಲೆಬ್ರಿಟಿಗಳು ಕೂಡ ಇವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದರು. ಅಷ್ಟರಮಟ್ಟಿಗೆ ಫೇಮಸ್ ಆಗಿದ್ದರು ಹನುಮಂತ. ಈಗಲೂ ಹನುಮಂತ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ, ಹಾಡುತ್ತಾರೆ. ಹೀಗಾಗಿ ಇವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 7’ ಆಫರ್ ಬಂದಿತ್ತು ಎಂಬ ಗಾಸಿಪ್ ಕೂಡ ಇತ್ತು. ಆದರೆ ಹನುಮಂತ ಹೋಗಲಿಲ್ಲ. ಆದ್ರೆ ಇದೀಗ ವೈಟ್ ಕಾರ್ಡ್ ಎಂಟ್ರಿ ಆಗಿ ಬಿಗ್ಬಾಸ್ 11 ರ ಮನೆಗೆ ಕಾಲಿರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಿರೂಪಕಿ ಅನುಶ್ರೀ ಹನುಮಂತಗೆ ಬೈಕ್ ಕೊಡಿಸಿದ್ದಾರೆ ಎಂದು ಯುವತಿಯೊಬ್ಬಳು ವಿಡಿಯೋ ಮಾಡಿ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹನುಮಂತ ಕೂಡ ಇದ್ದಾರೆ. ಆ ಬೈಕ್ ಮೇಲೆ ಅನುಶ್ರೀ ಫೋಟೋ ಕೂಡ ಇದೆ. ಈ ಬಗ್ಗೆ ವಿಜಯ ಕರ್ನಾಟಕದ ಜೊತೆಗೆ ಮಾತನಾಡಿರುವ ಅನುಶ್ರೀ “ನನಗೇನೂ ಗೊತ್ತಿಲ್ಲ, ನನ್ನ ಗಮನಕ್ಕೆ ಬಂದಿಲ್ಲ” ಎಂದು ಹೇಳಿದ್ದಾರೆ.

ಒಂದು ವೇಳೆ ಬೈಕ್ ಕೊಡಿಸಿದರೂ ಕೂಡ ಅದನ್ನು ಬೇರೆಯವರಿಗೆ ಹೇಳೋದು ಬೇಡ ಅಂಬುದು ಅನುಶ್ರೀ ಯೋಚನೆ ಆದರೂ ಆಗಿರಬಹುದು. ಅಥವಾ ಹನುಮಂತಗೆ ಬೈಕ್ ಕೊಡಿಸಿದ್ದು ಸುಳ್ಳು ಸುದ್ದಿ ಆಗಿರಬಹುದು. ನಿಜವೂ ಆಗಿರಬಹುದು ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *